ಮಾನವ ಭಾಷಾಂತರ Vs ಮಷೀನ್ ಭಾಷಾಂತರ – ಯಾವುದು ಒಳ್ಳೆಯದು?

Written By: Ajit Kulkarni

ಮಷೀನ್ ಭಾಷಾಂತರವು ಮಾನವ ಭಾಷಾಂತರಕ್ಕೆ ಪರ್ಯಾಯವಾಗಿದೆ. ಏಕೆಂದರೆ ಮಷೀನ್ ಭಾಷಾಂತರವು ಮನುಷ್ಯ ಮಾಡಿದ ಭಾಷಾಂತರಕ್ಕಿಂತ ಹೆಚ್ಚು ವೇಗದ್ದೂ ಹಾಗೂ ದಕ್ಷತೆ ಉಳ್ಳದ್ದೂ ಆಗಿರುವುದೇ ಇದಕ್ಕೆ ಕಾರಣವಾಗಿದೆ. ಹೀಗಾಗಿ, ಎಲ್ಲಿ ಮಷೀನ್‌ಗಳು ಮನುಷ್ಯನ ಜಾಗವನ್ನು ಆಕ್ರಮಿಸುತ್ತವೆಯೋ ಮತ್ತು ತಮ್ಮ ಉದ್ಯೋಗಗಳನ್ನು ಕಸಿದುಕೊಳ್ಳುತ್ತವೆಯೋ ಎಂಬ ಆತಂಕವನ್ನು ಭಾಷಾಂತರ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಇವೆರಡರಲ್ಲಿ ಯಾವುದು ಉತ್ತಮ ಎಂಬುದನ್ನು ಹಾಗೂ ಭವಿಷ್ಯದಲ್ಲಿ ಮಷೀನ್ ಭಾಷಾಂತರ ಮತ್ತು ಮಾನವ ಭಾಷಾಂತರಗಳಿಗೆ ದೊರೆಯುವ ಸ್ಥಾನವೇನು ಎಂಬುದನ್ನು ನೋಡೋಣ.

ಮಾನವ ಭಾಷಾಂತರ

ಮಾನವ ಭಾಷಾಂತರದ ವಿಷಯಕ್ಕೆ ಬಂದರೆ, ಮನುಷ್ಯನಿಗೆ ಹಲವಾರು ಶಬ್ದಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಿರುತ್ತದೆ. ನುಡಿಗಟ್ಟುಗಳು, ಭಾಷಾ ಶೈಲಿ, ಹಾಸ್ಯ ಮತ್ತು ವಿಡಂಬನೆ ಮುಂತಾದವನ್ನು ಮನುಷ್ಯನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾನೆ. ಅಷ್ಟೇ ಅಲ್ಲದೆ, ಮನುಷ್ಯನು ಸಾಂಸ್ಕೃತಿಕ ಮತ್ತು ಭಾಷಾ ವ್ಯತ್ಯಾಸಗಳನ್ನು ಬಲ್ಲವನಾಗಿರುತ್ತಾನೆ. ಮಾನವ ಭಾಷಾಂತರವು ಏಕೆ ಮುಖ್ಯ ಎಂದು ತೋರಿಸುವ ಒಂದು ಉದಾಹರಣೆಯನ್ನು ಈಗ ನೋಡೋಣ: ಕನ್ನಡದಲ್ಲಿ ಒಂದು ಗಾದೆ ಮಾತು ಇದೆ “ಹಾಸಿಗೆ ಇದ್ದಷ್ಟೇ ಕಾಲುಚಾಚು” ಅಂತ ಇದನ್ನು ಏನಾದರೂ ಮಷೀನ್ ಮೂಲಕ ಇಂಗ್ಲೀಷ್ ಭಾಷೆಗೆ ಭಾಷಾಂತರಿಸಿದರೆ, ಅದು “The only footprint in the bed” ಎಂದು ತೋರಿಸಬಹುದು. ನಾವು ನಮ್ಮ ಇತಿಮಿತಿಗಳಲ್ಲಿ ಬದುಕಬೇಕು ಎಂಬ ಅರ್ಥವುಳ್ಳ ಗಾದೆ ಮಾತನ್ನು ಮಷೀನ್ ತಿಳಿದುಕೊಳ್ಳುವುದಿಲ್ಲ. ಹೀಗಾಗಿ ಮಷೀನ್ ನೈಜ ಅರ್ಥವನ್ನು ಭಾಷಾಂತರಿಸಲಾರದು. 

ಹೀಗಾಗಿ ಈ ಮೇಲಿನ ಗಾದೆ ಮಾತನ್ನು ಸರಿಯಾಗಿ ಭಾಷಾಂತರ ಮಾಡಬೇಕಾದರೆ, ಅದರ ಒಳಾರ್ಥವನ್ನು ಮತ್ತು ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿರುತ್ತದೆ. ಮಷೀನ್‌ಗೆ ಇದು ಕಷ್ಟದ ಕೆಲಸ. 

ಮಷೀನ್ ಭಾಷಾಂತರ 

ಮಷೀನ್ ಭಾಷಾಂತರದ ವೇಗವೇ ಅದರ ಮುಖ್ಯ ಪ್ರಯೋಜನವಾಗಿದೆ. Google ಅಥವಾ Microsoft ಅಭಿವೃದ್ಧಿಪಡಿಸಿರುವ ಭಾಷಾಂತರ ಮಾಡುವ ಮಷೀನ್‌ಗಳ ಮೂಲಕ ಶಬ್ದ ಮತ್ತು ವಾಕ್ಯಗಳ ಭಾಷಾಂತರವನ್ನು ಕೆಲವೇ ಸೆಕೆಂಡ್‌ಗಳಲ್ಲಿ ಮಾಡಬಹುದು. ಈ ಕಾರಣಕ್ಕೆ ಅನೇಕ ವ್ಯಾಪಾರಿ ಸಂಸ್ಥೆಗಳು ಮಾನವ ಭಾಷಾಂತರಕ್ಕಿಂತ ಮಷೀನ್ ಭಾಷಾಂತರವನ್ನೇ ನೆಚ್ಚಿಕೊಂಡಿವೆ. 

ಮಷೀನ್ ಭಾಷಾಂತರದ ಎರಡನೇ ಅತಿ ಮುಖ್ಯವಾದ ಪ್ರಯೋಜನ ಏನೆಂದರೆ ಅದರ ಕಡಿಮೆ ವೆಚ್ಚ. ಹೀಗಾಗಿ ಈಗ ಅನೇಕ ವ್ಯಾಪಾರಿ ಸಂಸ್ಥೆಗಳಲ್ಲದೆ, ಭಾಷಾ ಸೇವೆಯನ್ನು ಒದಗಿಸುವ ಸಂಸ್ಥೆಗಳೂ ಕೂಡ ಹಣದ ಉಳಿತಾಯ ಮಾಡಲು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಮಷೀನ್ ಭಾಷಾಂತರವನ್ನು ಬಳಸಲು ಆರಂಭಿಸಿವೆ.

ಮಾನವ ಭಾಷಾಂತರ Vs ಮಷೀನ್ ಭಾಷಾಂತರ 

ಯಾವಾಗ ಭಾಷಾಂತರ ವಲಯದಲ್ಲಿ ಆಟೋಮೇಶನ್ ಆರಂಭವಾಯಿತೋ, ಮಾನವ ಭಾಷಾಂತರ ಮತ್ತು ಮಷೀನ್ ಭಾಷಾಂತರಗಳ ಕುರಿತ ಚರ್ಚೆಗಳೂ ಆರಂಭವಾದವು. ಇವೆರಡರ ಗುಣಮಟ್ಟದ ಕುರಿತ ಚರ್ಚೆಗಳೂ ಶುರುವಾದವು.

ಮೂಲಭೂತವಾಗಿ ನೋಡಿದರೆ, ಮಷೀನ್ ಭಾಷಾಂತರವು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಪದಗಳನ್ನು ಹಾಗೂ ವಾಕ್ಯಗಳನ್ನು ಬದಲಾಯಿಸುತ್ತದೆ. ಆದರೆ, ಇಲ್ಲಿ ಮನುಷ್ಯನ ಸಹಾಯವಿಲ್ಲದೆ, ಮಷೀನ್ ಭಾಷಾಂತರವು ಪರಿಪೂರ್ಣವಾಗದು. ಯಾವಾಗ ಆಡುಮಾತು ಮತ್ತು ನುಡಿಗಟ್ಟುಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಭಾಷಾಂತರ ಮಾಡುವ ಅಗತ್ಯ ಬರುತ್ತದೆಯೋ ಆಗ ಮನುಷ್ಯನ ಸಹಾಯ ಬೇಕೇ ಬೇಕಾಗುತ್ತದೆ. ಮಷೀನ್‌ ತನ್ನ ಸ್ವ-ಸ್ವಾಮರ್ಥ್ಯದಿಂದ ಇದನ್ನು ಮಾಡಲಾರದು.

ಮಷೀನ್ ಭಾಷಾಂತರ ಕ್ಷೇತ್ರದ ಮಾರುಕಟ್ಟೆ ಟ್ರೆಂಡ್

2020 ರಲ್ಲಿ USD 153.8 ಮಿಲಿಯನ್‌ನಷ್ಟಿದ್ದ ಮಷೀನ್ ಭಾಷಾಂತರದ ಮಾರುಕಟ್ಟೆ, 2026 ರ ವೇಳೆಗೆ USD 230.67 ಮಿಲಿಯನ್ ತಲುಪುವ ಅಂದಾಜು ಮಾಡಲಾಗಿದೆ. ಅಂದರೆ 2021-2026 ಅವಧಿಯ ಒಳಗೆ ಇದರ CAGR 7.1% ಆಗುತ್ತದೆ. ಹೆಚ್ಚುತ್ತಿರುವ ಜಾಗತೀಕರಣದಿಂದ ಕಂಟೆಂಟ್ ಲೋಕಲೈಸೇಶನ್ ಬೇಡಿಕೆಯು ಹೆಚ್ಚಿ, ಅತಿ-ವೇಗದ ಮತ್ತು ಕಡಿಮೆ ವೆಚ್ಚದ ಭಾಷಾಂತರವು ಬೇಕಾಗುತ್ತದೆ ಎಂಬುದನ್ನು ಇಲ್ಲಿ ಅರ್ಥ ಮಾಡಿಕೊಳ್ಳಬಹುದು. ಇಂತಹ ಬೇಡಿಕೆಯನ್ನು CAT (ಕಂಪ್ಯೂಟರ್ ಸಹಾಯದ ಭಾಷಾಂತರ) ಟೂಲ್‌ಗಳನ್ನು ಬಳಸುವ ಮೂಲಕ ಈಡೇರಿಸಲು ಸಾಧ್ಯವಿದೆ. ಹೆಚ್ಚಿನ ಮಟ್ಟದ ನಿಖರತೆಯನ್ನು ತಲುಪಲು ಈ ಟೂಲ್‌ಗಳನ್ನು ನಿರಂತರವಾಗಿ ವರ್ಧಿಸಲಾಗುತ್ತಿದೆ. 

ಮಷೀನ್ ಭಾಷಾಂತರ ವಲಯದಲ್ಲಿ ಇನ್ನೊಂದು ಆಸಕ್ತಿಕರ ಸಂಗತಿ ಏನೆಂದರೆ, ನ್ಯೂಟ್ರಲ್ ಮಷೀನ್ ಭಾಷಾಂತರದ (NMT) ಬೆಳವಣಿಗೆ. ಈ ತರಹದ ಆಟೋಮೇಶನ್‌, ದೊಡ್ಡ ಪ್ರಮಾಣದ ಡೇಟಾವನ್ನು ಆರ್ಟಿಫಿಷಿಯಲ್ ನ್ಯೂಟ್ರಲ್ ನೆಟ್‌ವರ್ಕ್ ರೂಪದಲ್ಲಿ ವಿಶ್ಲೇಷಿಸುತ್ತದೆ ಮತ್ತು ಪದಗಳ ಹಾಗೂ ವಾಕ್ಯಗಳ ನಿರಂತರತೆಯನ್ನು ಒಂದೇ ಏಕೀಕೃತ ಮಾದರಿಯಲ್ಲಿ ಸಮರ್ಥವಾಗಿ ಮುಂಗಾಣುತ್ತದೆ. ಸರಳ ಪದಗಳಲ್ಲಿ ಹೇಳುವುದಾದರೆ ಇದನ್ನು AI (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂದು ಕರೆಯಲಾಗುತ್ತದೆ.

ಮಷೀನ್ ಭಾಷಾಂತರದ ಅನಾನುಕೂಲಗಳು

  1. ಮಷೀನ್‌ಗಳು ಭಾವನೆಗಳನ್ನು, ನುಡಿಗಟ್ಟುಗಳನ್ನು, ಸಾಂಸ್ಕೃತಿಕ ಹಿನ್ನೆಲೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದಿಲ್ಲ.
  2. ಸಾಂದರ್ಭಿಕ ಹಿನ್ನೆಲೆಯನ್ನು ಮಷೀನ್ ತಿಳಿಯುವುದಿಲ್ಲ.
  3. ಮಷೀನ್ ಭಾಷಾಂತರವು ಪರಿಪೂರ್ಣವಾಗಿರುವುದಿಲ್ಲ.
  4. ಭಾಷೆಗಳಿಗೆ ತನ್ನದೇ ಆದ ವ್ಯಾಕರಣದ ರಚನೆ, ಪದಕೋಶ, ಒಂದೇ ಕಲ್ಪನೆಯನ್ನು ಅನೇಕ ರೀತಿಯಲ್ಲಿ ವ್ಯಕ್ತಪಡಿಸುವ ಜಾಣ್ಮೆ ಮುಂತಾದವು ಇರುತ್ತವೆ. ಮಷೀನ್‌ಗಳಿಗೆ ಇದು ಸಾಧ್ಯವಿಲ್ಲ.

ತೀರ್ಮಾನ

ಮಷೀನ್‌ಗಳು ಅಲ್ಗಾರಿದಂಗಳನ್ನು ಆಧರಿಸಿ ಭಾಷಾಂತರಿಸುತ್ತವೆ, ಆದರೆ ಮನುಷ್ಯನು ಭಾಷೆಯ ಮತ್ತು ಸಾಂಸ್ಕೃತಿಕ ತಿಳುವಳಿಕೆಯನ್ನು ಆಧರಿಸಿ ಭಾಷಾಂತರವನ್ನು ಮಾಡುತ್ತಾನೆ. ಭಾಷೆಯಲ್ಲಿನ ಸೂಕ್ಷ್ಮ ವ್ಯತ್ಯಾಸಗಳು ಮಷೀನ್‌ಗಳಿಗೆ ಗೊತ್ತಾಗುವುದಿಲ್ಲ. ಮನುಷ್ಯನಿಗೆ ಇದು ಸಹಜ ಸಾಧ್ಯವಿರುತ್ತದೆ.

ಹೀಗಾಗಿ, ಗುಣಮಟ್ಟ ಮತ್ತು ನಿಖರತೆಯ ವಿಷಯಕ್ಕೆ ಬಂದರೆ, ಮಷೀನ್‌ಗಳು ಮನುಷ್ಯನ ಸ್ಥಾನವನ್ನು ತುಂಬುವ ಕಾಲ ಹತ್ತಿರವಿಲ್ಲ ಎಂದು ಹೇಳಬಹುದು.

Leave a Reply

Your email address will not be published. Required fields are marked *